ಗರ್ಭಾಶಯದ ಫೈಬ್ರಾಯ್ಡ್‌ಗಳು ಎಂದರೇನು?

ಗರ್ಭಾಶಯದ ಸ್ನಾಯು ಕೋಶಗಳಲ್ಲಿ ಸಂಭವಿಸುವ ಕ್ಯಾನ್ಸರ್-ಅಲ್ಲದ ಬೆಳವಣಿಗೆಯ ಸ್ವರೂಪವೇಗರ್ಭಾಶಯ ಫೈಬ್ರಾಯ್ಡ್‌ಗಳು.ಒಬ್ಬರಿಂದ ಒಬ್ಬರಿಗೆ, ಮಹಿಳೆಯರಲ್ಲಿ ಗಾತ್ರಗಳಲ್ಲಿ ವಿಭಿನ್ನ ಸಂಖ್ಯೆಯ ಫೈಬ್ರಾಯ್ಡ್‌ಗಳನ್ನು ಕಂಡುಬರಬಹುದು. ಇದು ಒಂದು ಸಣ್ಣ ಬೀಜದಷ್ಟು ಚಿಕ್ಕಗಾತ್ರದಿಂದ ಹಿಡಿದು ಮತ್ತು ಬೃಹತ್ ರಾಶಿಯಷ್ಟು ದೊಡ್ಡದಾಗಿರಬಹುದು. ಸರಿಯಾದ ಪರೀಕ್ಷೆಯಿಲ್ಲದೆಯೂ ಶ್ರೋಣಿ ಪರೀಕ್ಷೆಯ ಸಮಯದಲ್ಲಿ ಇವು ಕೆಲವೊಮ್ಮೆ ಕಂಡುಬರುತ್ತವೆ. ಅದರ ನಂತರ, ಈ ಫೈಬ್ರಾಯ್ಡ್‌ಗಳ ಉಪಸ್ಥಿತಿಯನ್ನು ದೃಢೀಕರಿಸಲು ಇಮೇಜಿಂಗ್ ಮತ್ತು ಲ್ಯಾಬ್ ಪರೀಕ್ಷೆಗಳನ್ನು ಸಾಮಾನ್ಯವಾಗಿ ನಡೆಸಲಾಗುತ್ತದೆ.

ಸರಿಸುಮಾರು, ಋತುಬಂಧವನ್ನು ಹೊಂದಿದ 20-40% ಮಹಿಳೆಯರು ಫೈಬ್ರಾಯ್ಡ್‌ಗಳಿಂದ ಬಳಲುತ್ತಿದ್ದಾರೆ. ಕೆಲವು ವೈದ್ಯರ ಪ್ರಕಾರ, ಈ ಸಂಖ್ಯೆ ಇನ್ನೂ ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ. ವಾಸ್ತವವಾಗಿ, ಅವುಗಳನ್ನು ಹೊಂದಿರುವ ಕೇವಲ 5-10% ಮಹಿಳೆಯರು ಮಾತ್ರವೇ ನೈಜವಾದ ರೋಗಲಕ್ಷಣಗಳನ್ನು ಎದುರಿಸುತ್ತಿದ್ದಾರೆ. ಫೈಬ್ರಾಯ್ಡ್‌ಗಳ ಸ್ವರೂಪವು ಸಾಮಾನ್ಯವಾಗಿ ಅಪಾಯಕಾರಿಯಾಗಿರುವುದಿಲ್ಲ ಮತ್ತು ಅವು ದೇಹದ ಇತರ ಭಾಗಗಳಿಗೆ ಹರಡುವುದಿಲ್ಲ, ಆದರೆ ಅವು ರೋಗಲಕ್ಷಣಗಳನ್ನು ತೋರಿಸಲಾರಂಭಿಸಿದಾಗ ಅವು ತೀವ್ರಸ್ವರೂಪದ್ದಾಗಿರುತ್ತವೆ.

ಫೈಬ್ರಾಯ್ಡ್‌ಗಳನ್ನು ಹೊಂದಿರುವ ಹೆಚ್ಚಿನ ಮಹಿಳೆಯರು ಯಾವುದೇ ರೋಗಲಕ್ಷಣಗಳನ್ನು ಅನುಭವಿಸುವುದಿಲ್ಲವಾದ್ದರಿಂದ, ಇದು ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸುತ್ತದೆ. ಆದಾಗ್ಯೂ, ಯಾವುದೇ ರೋಗಲಕ್ಷಣಗಳನ್ನು ಅನುಭವಿಸದ ಮಹಿಳೆಯರು ಸಾಮಾನ್ಯವಾಗಿ ಅವುಗಳನ್ನು ಎದುರಿಸಲು ತೀವ್ರವಾದ ಜೀವನಶೈಲಿಯ ಬದಲಾವಣೆಗಳನ್ನು ಮಾಡಬೇಕಾಗುತ್ತದೆ.

ಗರ್ಭಾಶಯದ ಫೈಬ್ರಾಯ್ಡ್ ಉಂಟಾಗಲು ಕಾರಣಗಳು ಯಾವುವು?

ಫೈಬ್ರಾಯ್ಡ್‌ಗಳ ಬೆಳವಣಿಗೆಯ ಹಿಂದೆ ಯಾವುದೇ ಸ್ಪಷ್ಟ ಕಾರಣಗಳಿಲ್ಲ ಆದರೆ ಫೈಬ್ರಾಯ್ಡ್‌ಗಳ ರಚನೆಯ ಮೇಲೆ ಪ್ರಭಾವ ಬೀರುವ ಹಲವಾರು ಅಂಶಗಳಿವೆ.

ಗರ್ಭಾಶಯದ ಫೈಬ್ರಾಯ್ಡ್ ಉಂಟಾಗಲು ಕಾರಣಗಳು ಕೆಳಗಿನಂತಿವೆ-

1. ಹಾರ್ಮೋನುಗಳು-

ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟರಾನ್ ಸೇರಿದಂತೆ ಹಾರ್ಮೋನುಗಳು ಮಹಿಳೆಯರ ಅಂಡಾಶಯದಿಂದ ಉತ್ಪಾತ್ತಿಯಾಗುತ್ತದೆ. ಈ ಹಾರ್ಮೋನುಗಳು ಪ್ರತಿ ಋತುಚಕ್ರದ ಸಮಯದಲ್ಲಿ ಗರ್ಭಾಶಯದ ಒಳಪದರವನ್ನು ಪುನರ್ರಚಿಸಲು ಕಾರಣವಾಗುತ್ತವೆ ಮತ್ತು ಇವು ಫೈಬ್ರಾಯ್ಡ್‌ಗಳ ಬೆಳವಣಿಗೆಯನ್ನೂ ಉತ್ತೇಜಿಸಬಹುದು.

2. ಕುಟುಂಬ ಇತಿಹಾಸ-

ಕುಟುಂಬದಲ್ಲಿ ಫೈಬ್ರಾಯ್ಡ್‌ಗಳ ಸ್ಥಿತಿಯು ವಂಶವಾಹಿಯಾಗಿರಬಹುದು. ನಿಮ್ಮ ಅಜ್ಜಿ, ಸಹೋದರಿ ಅಥವಾ ತಾಯಿ ಸೇರಿದಂತೆ ನಿಮ್ಮ ಕುಟುಂಬ ಸದಸ್ಯರು ಫೈಬ್ರಾಯ್ಡ್‌ಗಳ ಇತಿಹಾಸವನ್ನು ಹೊಂದಿದ್ದರೆ, ನೀವು ಅದನ್ನು ಹೊಂದಬಹುದಾದ ಸಾಧ್ಯತೆ ಇರುತ್ತದೆ.

3. ಗರ್ಭಾವಸ್ಥೆ- ಗರ್ಭಾವಸ್ಥೆಯು –

ಮಹಿಳೆಯ ದೇಹದಲ್ಲಿ ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟರಾನ್ ಹಾರ್ಮೋನುಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಇದರ ಪರಿಣಾಮವಾಗಿ, ಗರ್ಭಾವಸ್ಥೆಯಲ್ಲಿಫೈಬ್ರಾಯ್ಡ್‌ಗಳು ವೇಗವಾಗಿ ಬೆಳೆಯಬಹುದು ಮತ್ತು ಅಭಿವೃದ್ಧಿಗೊಳ್ಳಬಹುದು.

ಗರ್ಭಾಶಯದಲ್ಲಿನ ಫೈಬ್ರಾಯ್ಡ್‌ನ ಲಕ್ಷಣಗಳು ಯಾವುವು?

ರೋಗಲಕ್ಷಣಗಳು ಮಹಿಳೆ ಹೊಂದಿರುವ ಫೈಬ್ರಾಯ್ಡ್‌ಗಳ ಸಂಖ್ಯೆಯನ್ನು ಸಂಪೂರ್ಣವಾಗಿ ಅವಲಂಬಿಸಿರುತ್ತದೆ. ಅವುಗಳ ಸ್ಥಳ ಮತ್ತು ಗಾತ್ರವೂ ಒಂದು ಪ್ರಮುಖ ಅಂಶವಾಗಿರುತ್ತದೆ. ಉದಾಹರಣೆಗೆ, ಸಬ್ಮ್ಯುಕೋಸಲ್ ಫೈಬ್ರಾಯ್ಡ್‌ಗಳು ಭಾರೀ ಮುಟ್ಟಿನ ರಕ್ತಸ್ರಾವ ಮತ್ತು ಗರ್ಭಧಾರಣೆಯಲ್ಲಿ ತೊಂದರೆಗಳಿಗೆ ಕಾರಣವಾಗಬಹುದು.

ಸಣ್ಣ ಗೆಡ್ಡೆಗಳನ್ನು ಹೊಂದಿರುವ ಅಥವಾ ಈಗಾಗಲೇ ಋತುಬಂಧಕ್ಕೊಳಗಾದ ಮಹಿಳೆಯರು, ಯಾವುದೇ ರೋಗಲಕ್ಷಣಗಳನ್ನು ಎದುರಿಸದಿರಬಹುದು, ಏಕೆಂದರೆ ಋತುಬಂಧದ ಸಮಯದಲ್ಲಿ ಅಥವಾ ನಂತರ ಅವುಗಳ ಬೆಳವಣಿಗೆಯನ್ನು ಉತ್ತೇಜಿಸುವ ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟರಾನ್ ಮಟ್ಟಗಳಲ್ಲಿ ಕುಸಿತವನ್ನು ಅನುಭವಿಸಿದಾಗ ಫೈಬ್ರಾಯ್ಡ್‌ಗಳು ಕುಗ್ಗಬಹುದು.

ಗರ್ಭಾಶಯದಲ್ಲಿನ ಫೈಬ್ರಾಯ್ಡ್‌ನ ಲಕ್ಷಣಗಳು ಕೆಳಗಿನಂತಿವೆ-

1. ದೀರ್ಘಕಾಲದ, ಭಾರೀ ಅಥವಾ ಅಸಹಜ ಮುಟ್ಟಿನ ರಕ್ತಸ್ರಾವವು ರಕ್ತಹೀನತೆಯ ಸಾಧ್ಯತೆಗೆ ಕಾರಣವಾಗುತ್ತದೆ.

2. ಸೊಂಟದಲ್ಲಿ ತೀವ್ರ ನೋವು. ಬೆನ್ನು ಮತ್ತು ಕಾಲುಗಳಲ್ಲಿನ ನೋವು ಸಹ ಅನೇಕ ಸಂದರ್ಭಗಳಲ್ಲಿ ಒಂದು ಲಕ್ಷಣವಾಗಿದೆ.

3. ದೈಹಿಕ ಸಂಭೋಗದ ಸಮಯದಲ್ಲಿ ನೋವು

4. ಮೂತ್ರಕೋಶದಲ್ಲಿನ ಒತ್ತಡವು ಆಗಾಗ್ಗೆ ಮೂತ್ರ ವಿಸರ್ಜಿಸಲು ಪ್ರಚೋದನೆಗೆ ಕಾರಣವಾಗುತ್ತದೆ

5. ಕರುಳಿನಲ್ಲಿನ ಒತ್ತಡದಿಂದಾಗಿ ಮಲಬದ್ಧತೆ

6. ಅಸಹಜ ಹೊಟ್ಟೆಯ ಊತ

ಫೈಬ್ರಾಯ್ಡ್‌ಗಳನ್ನು ಹೇಗೆ ರೋಗನಿರ್ಣಯ ಮಾಡಲಾಗುತ್ತದೆ?

ನಿಖರವಾದ ಮತ್ತು ವಿವರವಾದ ರೋಗನಿರ್ಣಯಕ್ಕಾಗಿ ನೀವು ಕೆಲವು ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ –

1. ಅಲ್ಟ್ರಾಸೌಂಡ್ ಸ್ಕ್ಯಾನ್-

ಗರ್ಭಾಶಯದ ಆಂತರಿಕ ರಚನೆಗಳು ಮತ್ತು ಫೈಬ್ರಾಯ್ಡ್‌ಗಳ ಉಪಸ್ಥಿತಿಯನ್ನು ವಿಶ್ಲೇಷಿಸಲು ಇದು ಸಹಾಯ ಮಾಡುತ್ತದೆ. ಈ ಸಂದರ್ಭದಲ್ಲಿ, ಟ್ರಾನ್ಸ್ವೆಜಿನಲ್ ಅಲ್ಟ್ರಾಸೌಂಡ್ ಸ್ಕ್ಯಾನ್ ಉತ್ತಮ ರೋಗನಿರ್ಣಯಕ್ಕಾಗಿ ಸ್ಪಷ್ಟವಾದ ಚಿತ್ರಗಳನ್ನು ಒದಗಿಸುತ್ತದೆ.

2. ಪೆಲ್ವಿಕ್ ಎಂಆರ್‌ಐ-

ಪೆಲ್ವಿಕ್ ಎಂಆರ್‌ಐ ಎಂಬುದು ಆಳವಾದ ಇಮೇಜಿಂಗ್ ಪರೀಕ್ಷಾ ವಿಧಾನವಾಗಿದ್ದು, ಇದು ಮಹಿಳೆಯ ಗರ್ಭಾಶಯ, ಅಂಡಾಶಯ ಮತ್ತು ಇತರ ಶ್ರೋಣಿಯ ಅಂಗಗಳ ಸ್ಪಷ್ಟ ಚಿತ್ರಗಳನ್ನು ಉತ್ಪಾದಿಸುತ್ತದೆ.

ಗರ್ಭಾಶಯದಲ್ಲಿನ ಫೈಬ್ರಾಯ್ಡ್ ಗೆ ಚಿಕಿತ್ಸೆ ಯಾವುದು?

ಫೈಬ್ರಾಯ್ಡ್‌ಗಳಿಗೆ ಸಂಬಂಧಿಸಿದ ನಿಮ್ಮ ಸಮಸ್ಯೆಗಳ ಬಗ್ಗೆ ಒಮ್ಮೆ ನೀವು ನಿಮ್ಮ ವೈದ್ಯರನ್ನು ಭೇಟಿ ಮಾಡಿದರೆ, ನಿಮ್ಮ ವಯಸ್ಸು, ನಿಮ್ಮ ಫೈಬ್ರಾಯ್ಡ್‌ಗಳ ಗಾತ್ರ ಮತ್ತು ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಅನುಸಾರವಾಗಿ ನಿಮ್ಮಫೈಬ್ರಾಯ್ಡ್ ಚಿಕಿತ್ಸೆಗಾಗಿ ಅವರು ಯೋಜನೆಯನ್ನು ಮಾಡುತ್ತಾರೆ. ನೀವು ಚಿಕಿತ್ಸೆಗಳ ಸಂಯೋಜನೆಯ ಮೂಲಕ ಹೋಗಬೇಕಾಗಬಹುದು.

ಫೈಬ್ರಾಯ್ಡ್ ಚಿಕಿತ್ಸೆಯು ಕೆಳಗಿನವುಗಳನ್ನು ಒಳಗೊಂಡಿದೆ-

ಔಷಧಿಗಳು-

ಗರ್ಭಾಶಯದಲ್ಲಿನ ಫೈಬ್ರಾಯ್ಡ್ ಚಿಕಿತ್ಸೆಗಾಗಿ, ನಿಮ್ಮ ಹಾರ್ಮೋನ್ ಮಟ್ಟವನ್ನು ಕುಗ್ಗಿಸಲು ಔಷಧಿಗಳನ್ನು ಸೂಚಿಸಲಾಗುತ್ತದೆ.
ಲ್ಯೂಪ್ರೊಲೈಡ್ (ಲೆಪ್ರೋನ್) ಸೇರಿದಂತೆ ಗೊನಡೋಟ್ರೋಪಿನ್-ಬಿಡುಗಡೆ ಮಾಡುವ ಹಾರ್ಮೋನ್ (ಜಿಎನ್‌ಆರ್‌ಹೆಚ್)ಅಗೋನಿಸ್ಟ್‌ಗಳು ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟರಾನ್ ಹಾರ್ಮೋನುಗಳ ಮಟ್ಟವನ್ನು ಕಡಿಮೆ ಮಾಡಲು ಮಾಡುತ್ತದೆ.

ಸೆಟ್ರೋರೆಲಿಕ್ಸ್ ಅಸಿಟೇಟ್ ಮತ್ತು ಗ್ಯಾನಿರೆಲಿಕ್ಸ್ ಅಸಿಟೇಟ್ ಸೇರಿದಂತೆ ಜಿಎನ್‌ಆರ್‌ಹೆಚ್ ಅಂಟಗೋನಿಸ್ಟ್‌ಗಳು ಫೈಬ್ರಾಯ್ಡ್ ಗಳನ್ನು ಕುಗ್ಗಿಸಲು ಸಹ ಸಹಾಯ ಮಾಡುತ್ತವೆ.

ಮುಟ್ಟಿನ ರಕ್ತಸ್ರಾವ ಮತ್ತು ನೋವನ್ನು ನಿಯಂತ್ರಿಸಲು ಸಹಾಯ ಮಾಡುವ ಇತರ ಆಯ್ಕೆಗಳಿವೆ, ಆದರೆ ಅವು ಫೈಬ್ರಾಯ್ಡ್‌ಗಳನ್ನು ಕುಗ್ಗಿಸುವುದಿಲ್ಲ ಅಥವಾ ನಿವಾರಿಸುವುದಿಲ್ಲ. ಅವುಗಳೆಂದರೆ,

1. ಜನನ ನಿಯಂತ್ರಣ ಮಾತ್ರೆಗಳು

2. ಪ್ರೊಜೆಸ್ಟಿನ್ ಹಾರ್ಮೋನ್ ಅನ್ನು ಬಿಡುಗಡೆ ಮಾಡುವ ಗರ್ಭಾಶಯದ ಸಾಧನ (ಐಯುಡಿ)

3. ಐಬುಪ್ರೊಫೇನ್ ಇತ್ಯಾದಿಗಳನ್ನು ಒಳಗೊಂಡಂತೆ ಓವರ್ ದ ಕೌಂಟರ್ (ಒಟಿಸಿ) ಉರಿಯೂತ-ವಿರೋಧಿ ನೋವು ನಿವಾರಕಗಳು.

ಶಸ್ತ್ರಚಿಕಿತ್ಸೆ-

ಶಸ್ತ್ರಚಿಕಿತ್ಸೆಯ ಮೂಲಕ ಬಹು ಅಥವಾ ದೊಡ್ಡ ಬೆಳವಣಿಗೆಗಳನ್ನು ತೆಗೆದುಹಾಕಬಹುದು. ತೆಗೆದುಹಾಕುವ ಈ ಪ್ರಕ್ರಿಯೆಯನ್ನುಮಯೋಮೆಕ್ಟಮಿಎಂದು ಕರೆಯಲಾಗುತ್ತದೆ, ಇದರಲ್ಲಿ ಗರ್ಭಾಶಯವನ್ನು ಪ್ರವೇಶಿಸಲು ಮತ್ತು ಫೈಬ್ರಾಯ್ಡ್ ಬೆಳವಣಿಗೆಯನ್ನು ತೆಗೆದುಹಾಕಲು ಕಿಬ್ಬೊಟ್ಟೆಯ ಭಾಗದಲ್ಲಿ ದೊಡ್ಡ ಛೇದನವನ್ನು ಮಾಡಲಾಗುತ್ತದೆ. ಕೆಲವು ಸಣ್ಣ ಛೇದನಗಳ ಸಹಾಯದಿಂದ ಶಸ್ತ್ರಚಿಕಿತ್ಸಾ ಉಪಕರಣಗಳು ಮತ್ತು ಕ್ಯಾಮೆರಾವನ್ನು ಸೇರಿಸುವಲ್ಯಾಪರೊಸ್ಕೋಪಿಮೂಲಕವೂ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತದೆ. ಆದರೆ ಶಸ್ತ್ರಚಿಕಿತ್ಸೆಯ ನಂತರ ಫೈಬ್ರಾಯ್ಡ್‌ಗಳು ಬೆಳೆಯುವ ಸಂಭವನೀಯತೆಯಿದೆ.

ಈ ಕಾರ್ಯವಿಧಾನದ ನಂತರವೂ, ನಿಮ್ಮ ಸ್ಥಿತಿಯು ಕೆಳಮಟ್ಟಕ್ಕೆ ಇಳಿಯುವುದನ್ನು ನಿಲ್ಲಿಸದಿದ್ದರೆ ಮತ್ತು ಇತರ ಚಿಕಿತ್ಸೆಗಳು ಕಾರ್ಯನಿರ್ವಹಿಸದಿದ್ದರೆ ನಿಮ್ಮ ತಜ್ಞರುಹಿಸ್ಟೆರೆಕ್ಟೊಮಿಹಿಸ್ಟೆರೆಕ್ಟೊಮಿಯನ್ನು ಮಾಡಬಹುದು. ಆದಾಗ್ಯೂ, ಈ ವಿಧಾನವು ಗರ್ಭಾಶಯವನ್ನು ತೆಗೆದುಹಾಕುವುದನ್ನು ಒಳಗೊಂಡಿದ್ದು, ಇದು ಭವಿಷ್ಯದಲ್ಲಿ ನೈಸರ್ಗಿಕವಾಗಿ ಮಕ್ಕಳನ್ನು ಹೊಂದುವುದನ್ನು ನಿಷೇಧಿಸುತ್ತದೆ.

 

ನೀವು ನಮ್ಮೊಂದಿಗೆ ಸೇರಬಹುದು Facebook, Instagram, Twitter, Linkedin, Youtube & Pinterest

ನಿಮ್ಮ ಗರ್ಭಧಾರಣೆ ಮತ್ತು ಫಲವತ್ತತೆಗೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳಿಗೆ ಇಂದು ದೇಶದ ಅತ್ಯುತ್ತಮ ಫಲವತ್ತತೆ ತಜ್ಞರ ತಂಡದೊಂದಿಗೆ ಮಾತನಾಡಿ.

Call now :- 18003092323

 

 

(Visited 43 times, 1 visits today)
guest
0 Comments
Inline Feedbacks
View all comments

RELATED BLOG

IVF

Diet Plan for Lactating Mothers: What to eat while breastfeeding?

You know breast milk is...
Read More
IVF

आईवीएफ में जुड़वा बच्चेः आईवीएफ गर्भावस्था और एकाधिक प्रेगनेंसी

सामान्य जुड़वा बच्चे बनाम आईवीएफ...
Read More
IVF

Right Time For IVF: Indications and Contraindications

The IVF procedure can be...
Read More
Female Infertility Hindi

बच्चेदानी में सूजन: लक्षण, कारण, निदान, एवं उपचार

एंडोमेट्रैटिस (Endometritis) अथवा बच्चेदानी में...
Read More
Hindi IVF

आईवीएफ के लिए ऋण: एक अवलोकन

संतान की चाह रखने वाले...
Read More
Hindi IVF

कैसे करें एक सही आईवीएफ सेंटर का चयन?

आईवीएफ एक सुप्रसिद्ध सहायक प्रजनन...
Read More
Hindi

जानिए आप प्रेगनेंट हैं या नहीं

प्रेगनेंसी के 10 प्रमुख लक्षण...
Read More
Female Infertility

7 things you must discuss with your gynaecologist!

With female friends or people...
Read More
Tamil

உங்கள் பிறக்காத குழந்தையைப் புரிந்துகொள்வோம்: கருவில் குழந்தை எப்படி வளர்கிறது!

கீழ்காணுமாறு ஒவ்வொரு வாரமும் கரு வளர்ச்சியடைவதை...
Read More
Kannada

ನಿಮಗೆ ಹುಟ್ಟಲಿರುವ ಮಗುವನ್ನು ಅರ್ಥಮಾಡಿಕೊಳ್ಳುವುದು: ಗರ್ಭದಲ್ಲಿ ಮಗು ಹೇಗೆ ಬೆಳೆಯುತ್ತದೆ!

ವಾರದಿಂದ ವಾರಕ್ಕೆ ಭ್ರೂಣ ಅಭಿವೃದ್ಧಿಯಬಗ್ಗೆ ಎಲ್ಲವನ್ನೂ...
Read More
Kannada

ಪಿಸಿಒಡಿ – ಕಾರಣಗಳು, ಲಕ್ಷಣಗಳು ಮತ್ತು ಚಿಕಿತ್ಸೆ

ಪಾಲಿಸಿಸ್ಟಿಕ್ ಅಂಡಾಶಯದ ಕಾಯಿಲೆ (ಪಿಸಿಒಡಿ)ಯು ಮಹಿಳೆಯರಲ್ಲಿ...
Read More
Kannada

ಅಂಡಾಶಯದ ಸಿಸ್ಟ್ (ಅಂಡಾಶಯದಲ್ಲಿ ಗಡ್ಡೆ): ಲಕ್ಷಣಗಳು, ಕಾರಣಗಳು ಮತ್ತು ಚಿಕಿತ್ಸೆ

ಅಂಡಾಶಯದ ಸಿಸ್ಟ್ (ಅಂಡಾಶಯದ ಸಿಸ್ಟ್‌ಗಳು) ಸಾಮಾನ್ಯವಾಗಿ...
Read More
Kannada

ಗರ್ಭಪಾತದ ಲಕ್ಷಣಗಳು, ಕಾರಣಗಳು ಮತ್ತು ರೋಗನಿರ್ಣಯವನ್ನು ತಿಳಿಯಿರಿ

ಗರ್ಭಪಾತವಾಗುವುದು ಅಪರೂಪದ ವಿದ್ಯಮಾನವಲ್ಲ. ಇದು 15...
Read More
Hindi PCOD

भ्रूण स्थानांतरण के बाद आहार

इन विट्रो फर्टिलाइजेशन (IVF) एक...
Read More
Hindi IUI

IUI उपचार की सफलता दर को बढ़ाने के 7 असरदार उपाय

अंतर्गर्भाशयी गर्भाधान अथवा IUI (Intrauterine...
Read More
Hindi IVF

आईवीएफ से पहले परीक्षण: एक नज़र में

इन विट्रो फर्टिलाइजेशन अथवा IVF...
Read More
Kannada

ಗರ್ಭಾಶಯದಲ್ಲಿನ ಫೈಬ್ರಾಯ್ಡ್‌ನ ಕಾರಣಗಳು, ಲಕ್ಷಣಗಳು ಮತ್ತು ಚಿಕಿತ್ಸೆಗಳು ಯಾವುವು?

ಗರ್ಭಾಶಯದ ಫೈಬ್ರಾಯ್ಡ್‌ಗಳು ಎಂದರೇನು? ಗರ್ಭಾಶಯದ ಸ್ನಾಯು...
Read More
Telugu

మీ పుట్టబోయే బిడ్డను అర్ధం చేసుకోవడం : గర్భంలో శిశువు ఎలా పెరుగుతుంది!

పిండం ప్రతివారం అభివృద్ధి గురించి దిగువ...
Read More
Telugu

గర్భాశయంలో ఫైబ్రాయిడ్ కు కారణాలు, లక్షణాలు మరియు చికిత్స ఏమిటి?

గర్భాశయ ఫైబ్రాయిడ్ లు అంటే ఏమిటి?...
Read More
Telugu

పీసీఓడీ – కారణాలు, లక్షణాలు మరియు చికిత్స

పాలిసిస్టిక్ అండాశయ రుగ్మత (పీసీఓడీ) అనేది...
Read More
Request Call Back
IVF
IVF telephone
Book An Appointment