ವಾರದಿಂದ ವಾರಕ್ಕೆ ಭ್ರೂಣ ಅಭಿವೃದ್ಧಿಯಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳೋಣ-

 

ವೀರ್ಯವು ಮೊಟ್ಟೆಯನ್ನು ಭೇಟಿಮಾಡುವುದು: ಗರ್ಭಾವಸ್ಥೆಯ 1 ರಿಂದ 3 ವಾರಗಳು

ಮಹಿಳೆಯ ಕೊನೆಯ ಋತುಚಕ್ರದ ಮೊದಲನೇ ದಿನದಿಂದ ಅವಳ ಮುಂದಿನ ಋತುಚಕ್ರದ ದಿನವನ್ನು ಲೆಕ್ಕಹಾಕಲಾಗುತ್ತದೆ. ಆ ದಿನದಿಂದ ಎರಡು ವಾರಗಳವರೆಗೆ ಗರ್ಭಧಾರಣೆಯು ಸಂಭವಿಸುತ್ತದೆ – ಆಗ ನಿಮ್ಮನ್ನು ನಿಜವಾಗಿಯೂ ಗರ್ಭಿಣಿ ಎಂದು ಪರಿಗಣಿಸಲಾಗುತ್ತದೆ! ಮೊಟ್ಟೆಯನ್ನು ಫಲವತ್ತಾಗಿಸುವ ಕ್ರಿಯೆಯಲ್ಲಿ ಲಕ್ಷಾಂತರ ವೀರ್ಯಗಳು ಪ್ರವಾಹದೋಪಾದಿಯಲ್ಲಿ ಮೇಲಕ್ಕೆ ಈಜುತ್ತವೆ. ಆದರೆ ಒಂದು ಮಾತ್ರ ಮೊಟ್ಟೆಯನ್ನು ಯಶಸ್ವಿಯಾಗಿ ಭೇದಿಸಿ, ಮಗುವಿನ ಲೈಂಗಿಕತೆ, ದೈಹಿಕ ನೋಟ, ಬುದ್ಧಿವಂತಿಕೆ ಮತ್ತು ವ್ಯಕ್ತಿತ್ವವನ್ನು ನಿರ್ಧರಿಸುವ ಆನುವಂಶಿಕ ಸ್ವರೂಪವನ್ನು ರೂಪಿಸುತ್ತದೆ.

 

ಗರ್ಭದಲ್ಲಿ ಬೆಳೆಯುತ್ತಿರುವ ಮಗು: ಗರ್ಭಧಾರಣೆಯ 4 ರಿಂದ 8 ವಾರಗಳು

ನಿಮ್ಮ ಗರ್ಭಧಾರಣೆಯ 4ನೇ ವಾರದ ಹೊತ್ತಿಗೆ,ಗರ್ಭಾಶಯದಲ್ಲಿ ಬೆಳೆಯುತ್ತಿರುವ ಮಗುವಿನ ಜೀವಕೋಶಗಳ ಸಮೂಹವು ಗಸಗಸೆ ಬೀಜದಷ್ಟು ಗಾತ್ರವಿರುತ್ತದೆ. 5ನೇ ವಾರದ ಹೊತ್ತಿಗೆ, ಕೋಶಗಳ ಸಮೂಹವು ಗೊದಮೊಟ್ಟೆಯನ್ನು ಹೋಲುತ್ತದೆ ಮತ್ತು ಅದು ಮೆಣಸಿನಕಾಳಿನಷ್ಟು ಗಾತ್ರವಿರುತ್ತದೆ.ಭ್ರೂಣದ ಬೆಳವಣಿಗೆ ಎಂದು ಒಟ್ಟಾರೆಯಾಗಿ ಕರೆಯಲ್ಪಡುವ ಮೆದುಳು, ಬೆನ್ನುಹುರಿ ಮತ್ತು ಹೃದಯದ ಬೆಳವಣಿಗೆಯು ನಡೆಯುತ್ತಿರುತ್ತದೆ, ಮುಖದ ಲಕ್ಷಣಗಳು ರೂಪುಗೊಳ್ಳಲು ಪ್ರಾರಂಭಿಸುತ್ತವೆ ಮತ್ತು ಹೊಕ್ಕುಳಬಳ್ಳಿಯು ಮಗುವನ್ನು ನಿಮ್ಮ ದೇಹಕ್ಕೆ ಸಂಪರ್ಕಿಸುತ್ತದೆ.


 

ಪಿಂಡ ಬೆಳವಣಿಗೆಯಿಂದ ಭ್ರೂಣದ ಬೆಳವಣಿಗೆಯವರೆಗೆ: ಗರ್ಭಧಾರಣೆಯ 9 ರಿಂದ 12 ನೇ ವಾರ

9 ನೇ ವಾರದ, ಭ್ರೂಣದ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ನಿಮ್ಮ ಶಿಶುವು ಪಿಂಡದಿಂದ ಭ್ರೂಣಕ್ಕೆ ಬೆಳೆದಿರುತ್ತದೆ. ಭ್ರೂಣವು ಮಾಡುವ ಆರಂಭಿಕ ಚಲನೆಗಳಲ್ಲಿ ಒಂದಾದ – ಮಗುವಿನ ಬಿಕ್ಕಳಿಕೆಯಿಂದಾಗಿ ಉಂಟಾದ ಎಳೆತಗಳನ್ನು ನೀವು ಶೀಘ್ರದಲ್ಲೇ ಅನುಭವಿಸುವಿರಿ. ಮುಖದ ಲಕ್ಷಣಗಳು ಅಭಿವೃದ್ಧಿಯಾಗುತ್ತಿರುತ್ತವೆ ಮತ್ತು 10 ವಾರಗಳ ಅಂತ್ಯದ ವೇಳೆಗೆ, ಶಿಶುವಿಗೆ ವಯಸ್ಕರ 90 ಪ್ರತಿಶತದಷ್ಟು ಅಂಗರಚನೆ ಅಭಿವೃದ್ಧಿಯಾಗಿರುತ್ತದೆ.

 

ಎರಡನೇ ತ್ರೈಮಾಸಿಕದ ಪ್ರಾರಂಭ: ಗರ್ಭಧಾರಣೆಯ 13 ರಿಂದ 17 ವಾರಗಳು

ಅಭಿನಂದನೆಗಳು! ನೀವು ಈಗ ನಿಮ್ಮ ಎರಡನೇ ತ್ರೈಮಾಸಿಕವನ್ನು ಪ್ರವೇಶಿಸುತ್ತಿದ್ದೀರಿ. ನಿಮ್ಮ ಮಗುವಿನ ಎಲ್ಲಾ ಆಂತರಿಕ ಅಂಗಗಳು ರೂಪುಗೊಂಡಿರುತ್ತವೆ ಮತ್ತು ಎರಡನೆಯ ಹಾಗೂ ಮೂರನೇ ತ್ರೈಮಾಸಿಕಗಳ ಮೂಲಕ ಪ್ರೌಢಾವಸ್ಥೆ ತಲುಪುತ್ತದೆ. ಮಗುವಿನ ಕಣ್ಣುಗಳು ಮುಚ್ಚಿದ್ದರೂ, ನಿಮ್ಮ ಮಗು ಈಗ ಕೇಳಲು ಪ್ರಾರಂಭಿಸಬಹುದು. ಅವನೊಂದಿಗೆ/ಅವಳೊಂದಿಗೆ ಮಾತನಾಡಿ ಮತ್ತು ಓದಿ ಹೇಳಿ, ಇದರಿಂದ ಅವನು/ಅವಳು ನಿಮ್ಮ ಧ್ವನಿಯನ್ನು ತಿಳಿದುಕೊಳ್ಳಬಹುದು.

 

ಶಿಶುವಿನ ಚಲನೆಯ ಅನುಭವ: ಗರ್ಭಧಾರಣೆಯ 18 ರಿಂದ 21 ವಾರಗಳು

ಈಗ ಮತ್ತು 22 ವಾರಗಳ ನಡುವೆ ನಿಮ್ಮ ಮಗುವು ಅಲ್ಲಾಡುವ ಚಲನೆಯನ್ನು (ಚುರುಕುತನ ಎಂದು ಕರೆಯಲಾಗುತ್ತದೆ) ನೀವು ಅನುಭವಿಸಲು ಪ್ರಾರಂಭಿಸುತ್ತೀರಿ. ಸಿದ್ಧರಾಗಿ, ಅಮ್ಮಂದಿರೇ: ಶಿಶುವ ಒದೆಯುವ ಭಾವನೆಯು ಗರ್ಭಿಣಿಯಾಗುವ ಮಾಂತ್ರಿಕ ಭಾಗಗಳಲ್ಲಿ ಒಂದಾಗಿದೆ. 22 ನೇ ವಾರದ ಹೊತ್ತಿಗೆ, ನಿಮ್ಮ ಮಗು ತೆಂಗಿನಕಾಯಿಯಷ್ಟು ದೊಡ್ಡದಾಗಿರುತ್ತದೆ.

 

;ಹುಡುಗ ಅಥವಾ ಹುಡುಗಿ: ಜೆನೆಟಿಕ್ಸ್ ನಿಮ್ಮ ಮಗುವಿನ ಲಿಂಗವನ್ನು ಹೇಗೆ ನಿರ್ಧರಿಸುತ್ತದೆ

ಮಗುವಿನ ಆನುವಂಶೀಕ ಸಂಕೇತದಲ್ಲಿ ಬರೆದಿರುವ ಪ್ರಕಾರ, ನಿಮ್ಮ ಮಗು ಹುಡುಗ ಅಥವಾ ಹುಡುಗಿಯಾಗುವ ಪ್ರಕ್ರಿಯೆಯು ವಿಸ್ಮಯ ಹುಟ್ಟಿಸುವುದಾಗಿದೆ. ಮಹಿಳೆಯರಲ್ಲಿ ಎರಡು X ಕ್ರೋಮೋಸೋಮ್‍ಗಳಿರುತ್ತವೆ, ಮತ್ತು ಪುರುಷರಲ್ಲಿ X ಮತ್ತು Y ಕ್ರೋಮೋಸೋಮ್‍ಗಳಿರುತ್ತವೆ; ಪ್ರತಿ ವೀರ್ಯವು ಎರಡರಲ್ಲಿ ಒಂದನ್ನು ಒಯ್ಯುತ್ತದೆ, ಇದು ಪುರುಷರ ವೀರ್ಯವು ಮಗುವಿನ ಲೈಂಗಿಕತೆಯನ್ನು ನಿರ್ಧರಿಸಲು ಕಾರಣವಾಗುತ್ತದೆ. ಮಾನವರು ಸುಮಾರು 25,000 ವಂಶವಾಹಿಗಳನ್ನು ಹೊಂದಿರುತ್ತಾರೆ, ಆದರೆ ಪುರುಷರ ಬೆಳವಣಿಗೆಗೆ Y ಕ್ರೋಮೋಸೋಮ್‍ನಲ್ಲಿರುವ ಒಂದು ಜೀನ್ ಮಾತ್ರ ಅಗತ್ಯವಿದೆ. 7 ನೇ ವಾರದಲ್ಲಿ, ಗಂಡು ಮತ್ತು ಹೆಣ್ಣು ನಡುವಿನ ಅಂಗರಚನಾ ವ್ಯತ್ಯಾಸಗಳು ಜೀನ್‍ನಿಂದ ನಿರ್ಧರಿಸಲ್ಪಡುತ್ತವೆ.

கருப்பை நீர்க்கட்டி காரணங்கள்

ಇಂದ್ರಿಯಗಳ ಬೆಳವಣಿಗೆ: ಗರ್ಭಧಾರಣೆಯ 22 ರಿಂದ 25 ವಾರಗಳು

ನಿಮ್ಮ ಮಗು ಈಗ ಒಂದು ಪೂರ್ಣ ಪೌಂಡ್ ತೂಗುತ್ತದೆ ಮತ್ತು ಅವನು/ಅವಳು ನೋಡುವ, ಕೇಳುವ, ವಾಸನೆ ಗ್ರಹಿಸುವ, ರುಚಿಯ ಸಾಮರ್ಥ್ಯವನ್ನು ಹೊಂದುತ್ತಾರೆ ಮತ್ತು ಭಾವನೆಯು ಪ್ರತಿದಿನ ಬಲಗೊಳ್ಳುತ್ತದೆ. ಧ್ವನಿ ತಂತುಗಳು ಅಭಿವೃದ್ಧಿಗೊಳ್ಳುತ್ತವೆ ಮತ್ತು ಅವನು/ಅವಳು ನಿಮ್ಮ ಧ್ವನಿಯನ್ನು ಗುರುತಿಸಲು ಮತ್ತು ನಿಮ್ಮ ದೇಹದಲ್ಲಿ ನಡೆಯುತ್ತಿರುವ ವಿಷಯಗಳ ಶಬ್ದಗಳನ್ನು ಕೇಳಲು ಪ್ರಾರಂಭಿಸುತ್ತಾರೆ.

 

ನಿದ್ರೆಯ ಚಕ್ರಗಳು: ಗರ್ಭಾವಸ್ಥೆಯ 26 ರಿಂದ 30 ವಾರಗಳು

ನಿಮ್ಮ ಮೂರನೇ ತ್ರೈಮಾಸಿಕದಲ್ಲಿದ್ದೀರಿ! 28ನೇ ವಾರದ ಹೊತ್ತಿಗೆ, ನಿಮ್ಮ ಮಗು ಅವನ/ಅವಳ ಕಣ್ಣುಗಳನ್ನು ತೆರೆಯಲು, ಮಿಟುಕಿಸಲು ಮತ್ತು ಉಸಿರಾಟವನ್ನು ಅಭ್ಯಾಸ ಮಾಡಲು ಪ್ರಾರಂಭಿಸುತ್ತದೆ. ಈ ಸಮಯದಲ್ಲಿ, ಅವನು/ಅವಳು ದಿನದ ನಿರ್ದಿಷ್ಟ ಸಮಯಗಳಲ್ಲಿ ಎಚ್ಚರವಾಗಿರುತ್ತಾರೆ ಮತ್ತು ನಿದ್ರಿಸುತ್ತಾರೆ. 30 ರಿಂದ 90 ನಿಮಿಷಗಳ ನಿದ್ರೆಯ ನಂತರ, ಅವನು / ಅವಳು ಎಚ್ಚರವಾಗಿರುವುದನ್ನು ಸೂಚಿಸಲು ಅವನು/ಅವಳು ಒದೆಯಬಹುದು. ಅವನು/ಅವಳು ಕನಸು ಕಾಣಲು ಪ್ರಾರಂಭಿಸುವ ಸಾಧ್ಯತೆಯೂ ಇದೆ.

 

ದೊಡ್ಡದಾಗಿ ಬೆಳೆಯುವುದು: ಗರ್ಭಧಾರಣೆಯ 31 ರಿಂದ 34ನೇ ವಾರಗಳು

ನಿಮ್ಮ ಮಗು ಈಗ ಸುಮಾರು ಮೂರು ಪೌಂಡ್‍ಗಳಷ್ಟು ತೂಗುತ್ತದೆ, ಸರಿಸುಮಾರು ಕಲ್ಲಂಗಡಿ ಹಣ್ಣಿನಷ್ಟು ಗಾತ್ರ. ಅವನು/ಅವಳು ಹುಟ್ಟುವ ತನಕ ಅವನು/ಅವಳು ವಾರಕ್ಕೆ ಒಂದೂವರೆ ಪೌಂಡ್‌ನಷ್ಟು ತೂಕ ಹೆಚ್ಚುತ್ತಿರುತ್ತದೆ. ಅವನನ್ನು/ಅವಳನ್ನು ಸೋಂಕಿನಿಂದ ರಕ್ಷಿಸಲು ನಿಮ್ಮ ದೇಹವು ಅವನಿಗೆ/ಅವಳಿಗೆ ಪ್ರತಿಕಾಯಗಳನ್ನು ಕಳುಹಿಸುತ್ತದೆ. ಗರ್ಭದಿಂದ ಹೊರಬರಲು ಅವನನ್ನು/ಅವಳನ್ನು ಸಿದ್ಧಪಡಿಸಲು ನಿಮ್ಮ ಮಗುವಿನ ದೇಹವು ಅನೇಕ ಹೊಸ ಬೆಳವಣಿಗೆಗಳನ್ನು ಹೊಂದುತ್ತದೆ.

 

ನಿಮ್ಮ ಮಗು ಬಹುತೇಕ ಇಲ್ಲಿದೆ: ಗರ್ಭಧಾರಣೆಯ 35 ನೇ ವಾರದಿಂದ ಜನನದವರೆಗೆ

ಅಂತಿಮವಾಗಿ! ನಿಮ್ಮ ಮಗ ಅಥವಾ ಮಗಳನ್ನು ಭೇಟಿಯಾಗಲಿದ್ದೀರಿ. ಜನನದ ತಯಾರಿಯಲ್ಲಿ, ನಿಮ್ಮ ಮಗು ಈಗ ನಿಮ್ಮ ಗರ್ಭಾಶಯದಲ್ಲಿ ತಲೆಕೆಳಗಾಗಿರುತ್ತದೆ. ಒಂದು ವೇಳೆ ಅವನು/ಅವಳು ಹಾಗಿಲ್ಲದಿದ್ದರೆ, ನಿಮ್ಮ ವೈದ್ಯರು ಅವನನ್ನು/ಅವಳನ್ನು ಹೆರಿಗೆಗೆ ಸಿದ್ಧಪಡಿಸಲು ಕೆಲವು ತಂತ್ರಗಳನ್ನು ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಮಗುವು ತಲೆಕೆಳಗಾದ ಸ್ಥಾನದಲ್ಲಿದ್ದರೆ, ಅವನ/ಅವಳ ತಲೆ ನಿಮ್ಮ ಗರ್ಭಕಂಠದಲ್ಲಿರುತ್ತದೆ, ಆಗ ಗರ್ಭಕಂಠವು ತೆರೆಯುತ್ತದೆ ಅಥವಾ ಹಿಗ್ಗುತ್ತದೆ ಆದ್ದರಿಂದ ಅವನು/ಅವಳು ಜನ್ಮ ಕಾಲುವೆಯ ಮೂಲಕ ಹಾದುಹೋಗಬಹುದು.

ಇದು ಗರ್ಭಾಶಯದಲ್ಲಿ ಮಗುವಿನ ಅದ್ಭುತ ಪ್ರಯಾಣ ಅಥವಾ ವಾರದಿಂದ ವಾರಕ್ಕೆ ಭ್ರೂಣದ ಬೆಳವಣಿಗೆಯಾಗಿದೆ; ಈ ಹಂತಗಳನ್ನು ಒಂದು ಮಗುವು ನಿಮ್ಮ ಗರ್ಭಾಶಯದಿಂದ ಹೊರಬಂದು ಜಗತ್ತಿಗೆ ಪ್ರವೇಶಿಸುವಾಗ ಒಂದು ಮಗುವು ಹಾದುಹೋಗುತ್ತದೆ.

 

ನೀವು ನಮ್ಮೊಂದಿಗೆ ಸೇರಬಹುದು Facebook, Instagram, Twitter, Linkedin, Youtube & Pinterest

ನಿಮ್ಮ ಗರ್ಭಧಾರಣೆ ಮತ್ತು ಫಲವತ್ತತೆಗೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳಿಗೆ ಇಂದು ದೇಶದ ಅತ್ಯುತ್ತಮ ಫಲವತ್ತತೆ ತಜ್ಞರ ತಂಡದೊಂದಿಗೆ ಮಾತನಾಡಿ.

Call now :- 18003092323

 

 

(Visited 56 times, 1 visits today)
guest
0 Comments
Inline Feedbacks
View all comments

RELATED BLOG

IVF

Diet Plan for Lactating Mothers: What to eat while breastfeeding?

You know breast milk is...
Read More
IVF

आईवीएफ में जुड़वा बच्चेः आईवीएफ गर्भावस्था और एकाधिक प्रेगनेंसी

सामान्य जुड़वा बच्चे बनाम आईवीएफ...
Read More
IVF

Right Time For IVF: Indications and Contraindications

The IVF procedure can be...
Read More
Female Infertility Hindi

बच्चेदानी में सूजन: लक्षण, कारण, निदान, एवं उपचार

एंडोमेट्रैटिस (Endometritis) अथवा बच्चेदानी में...
Read More
Hindi IVF

आईवीएफ के लिए ऋण: एक अवलोकन

संतान की चाह रखने वाले...
Read More
Hindi IVF

कैसे करें एक सही आईवीएफ सेंटर का चयन?

आईवीएफ एक सुप्रसिद्ध सहायक प्रजनन...
Read More
Hindi

जानिए आप प्रेगनेंट हैं या नहीं

प्रेगनेंसी के 10 प्रमुख लक्षण...
Read More
Female Infertility

7 things you must discuss with your gynaecologist!

With female friends or people...
Read More
Tamil

உங்கள் பிறக்காத குழந்தையைப் புரிந்துகொள்வோம்: கருவில் குழந்தை எப்படி வளர்கிறது!

கீழ்காணுமாறு ஒவ்வொரு வாரமும் கரு வளர்ச்சியடைவதை...
Read More
Kannada

ನಿಮಗೆ ಹುಟ್ಟಲಿರುವ ಮಗುವನ್ನು ಅರ್ಥಮಾಡಿಕೊಳ್ಳುವುದು: ಗರ್ಭದಲ್ಲಿ ಮಗು ಹೇಗೆ ಬೆಳೆಯುತ್ತದೆ!

ವಾರದಿಂದ ವಾರಕ್ಕೆ ಭ್ರೂಣ ಅಭಿವೃದ್ಧಿಯಬಗ್ಗೆ ಎಲ್ಲವನ್ನೂ...
Read More
Kannada

ಪಿಸಿಒಡಿ – ಕಾರಣಗಳು, ಲಕ್ಷಣಗಳು ಮತ್ತು ಚಿಕಿತ್ಸೆ

ಪಾಲಿಸಿಸ್ಟಿಕ್ ಅಂಡಾಶಯದ ಕಾಯಿಲೆ (ಪಿಸಿಒಡಿ)ಯು ಮಹಿಳೆಯರಲ್ಲಿ...
Read More
Kannada

ಅಂಡಾಶಯದ ಸಿಸ್ಟ್ (ಅಂಡಾಶಯದಲ್ಲಿ ಗಡ್ಡೆ): ಲಕ್ಷಣಗಳು, ಕಾರಣಗಳು ಮತ್ತು ಚಿಕಿತ್ಸೆ

ಅಂಡಾಶಯದ ಸಿಸ್ಟ್ (ಅಂಡಾಶಯದ ಸಿಸ್ಟ್‌ಗಳು) ಸಾಮಾನ್ಯವಾಗಿ...
Read More
Kannada

ಗರ್ಭಪಾತದ ಲಕ್ಷಣಗಳು, ಕಾರಣಗಳು ಮತ್ತು ರೋಗನಿರ್ಣಯವನ್ನು ತಿಳಿಯಿರಿ

ಗರ್ಭಪಾತವಾಗುವುದು ಅಪರೂಪದ ವಿದ್ಯಮಾನವಲ್ಲ. ಇದು 15...
Read More
Hindi PCOD

भ्रूण स्थानांतरण के बाद आहार

इन विट्रो फर्टिलाइजेशन (IVF) एक...
Read More
Hindi IUI

IUI उपचार की सफलता दर को बढ़ाने के 7 असरदार उपाय

अंतर्गर्भाशयी गर्भाधान अथवा IUI (Intrauterine...
Read More
Hindi IVF

आईवीएफ से पहले परीक्षण: एक नज़र में

इन विट्रो फर्टिलाइजेशन अथवा IVF...
Read More
Kannada

ಗರ್ಭಾಶಯದಲ್ಲಿನ ಫೈಬ್ರಾಯ್ಡ್‌ನ ಕಾರಣಗಳು, ಲಕ್ಷಣಗಳು ಮತ್ತು ಚಿಕಿತ್ಸೆಗಳು ಯಾವುವು?

ಗರ್ಭಾಶಯದ ಫೈಬ್ರಾಯ್ಡ್‌ಗಳು ಎಂದರೇನು? ಗರ್ಭಾಶಯದ ಸ್ನಾಯು...
Read More
Telugu

మీ పుట్టబోయే బిడ్డను అర్ధం చేసుకోవడం : గర్భంలో శిశువు ఎలా పెరుగుతుంది!

పిండం ప్రతివారం అభివృద్ధి గురించి దిగువ...
Read More
Telugu

గర్భాశయంలో ఫైబ్రాయిడ్ కు కారణాలు, లక్షణాలు మరియు చికిత్స ఏమిటి?

గర్భాశయ ఫైబ్రాయిడ్ లు అంటే ఏమిటి?...
Read More
Telugu

పీసీఓడీ – కారణాలు, లక్షణాలు మరియు చికిత్స

పాలిసిస్టిక్ అండాశయ రుగ్మత (పీసీఓడీ) అనేది...
Read More
Request Call Back
IVF
IVF telephone
Book An Appointment